`ಪೌರ್ಣಮಿ` ಮೇಘ ಚಂದ್ರಮ!
Posted date: 09 Mon, Sep 2013 – 06:03:49 PM

ಪೌರ್ಣಮಿ ಅಂತಹ ಅಪ್ಪಟ ಕನ್ನಡ ಶೀರ್ಷಿಕೆ ಹಾಗೂ ಪೌರ್ಣಮಿಯ ಪೂರ್ಣ ಚಂದ್ರನ ಬೆಳಕಿನಂತೆ ಒಂದು ಸುಂದರ ಚಿತ್ರವನ್ನು ಕಟ್ಟಿಕೊಡಲು ಫಿಲ್ಮ್ ಫ್ಯಾಕ್ಟರೀ ಕಂಬೈನ್ಸ್ ತಯಾರಿ ಶುರುವಿಟ್ಟುಕೊಂಡಿದೆ.ಇದೆ ಮೊದಲ ಬಾರಿಗೆ ಹೆಸರಾಂತ ನಾಯಕಿ ನಿಕಿತ ಹಾಗೂ ಒಲವೇ ಮಂದಾರ ಶ್ರೀಕಿ ಜೋಡಿ ಅಭಿನಯದ `ಪೌರ್ಣಮಿ` ಗಣೇಶ ಚತುರ್ಥಿ ಅಂದು ಪ್ರಾರಂಬವಾಗಿದೆ.
`ಪೌರ್ಣಮಿಯ` ಬೆಳಕಿನಂತೆ ಬೆಳಗುವ ನಾಯಕಿ ನಾಯಕನ ಜೀವನದಲ್ಲಿ ಹೇಗೆ, ಏನು ಎತ್ತ ಎಂಬುದನ್ನೂ ಎನ್ ಎಸ್ ಶ್ರೀಧರ್ ಅವರೇ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಲಭ್ಯವಿದೆ.
ಈ ಚಿತ್ರಕ್ಕಾಗಿ ಈಗಾಗಲೇ ಸೋನು ನಿಗಂ, ಸುನಿಧಿ ಚೌಹಾಣ್, ಸಿಂಚನ ದೀಕ್ಷಿತ್ ಅವರ ಕಂಠ ಸಿರಿಯಲ್ಲಿ ಹಾಡುಗಳ ಧ್ವನಿ ಮುದ್ರಣವನ್ನು ಸಂಗೀತ ನಿರ್ದೇಶಕ ಅರುಣ್ ಅವರು ಸಂಪೂರ್ಣಗೊಳಿಸಿದ್ದಾರೆ. ಇವರು ಈ ಹಿಂದೆ `ಕೇಡಿಗಳು`ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದವರು. ಈ ಚಿತ್ರಕ್ಕೆ ಗೌರಿ ವೆಂಕಟೇಶ್ ಹಾಗೂ ವಿಕ್ರಮ್ ಯೋಗಾನಂದ್ ಛಾಯಾಗ್ರಾಹಕರು. ಕಿರಣ್ ವಿಪ್ರ ಹಾಗೂ ರಾಮಕೃಷ್ಣ ರಣಗಟ್ಟಿ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೊಸಮನೆ ಮೂರ್ತಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.
ವಿಲ್ಮ್ ಫ್ಯಾಕ್ಟರೀ ಕಂಬೈನ್ಸ್ ಅಡಿಯಲ್ಲಿ ಹರೀಶ್ಕುಮಾರ್ ಎಂ, ವೆಂಕಟೇಶ್ ಬಾಬು ಎನ್, ವಿ ನಾರಾಯಣಸ್ವಾಮಿ ಹಾಗೂ ಬಿ ಎಸ್ ಲೋಹಿತ್ ಅವರುಗಳು ನಿರ್ಮಾಪಕರು ಈ ‘ಪೌರ್ಣಮಿ’ ಚಿತ್ರಕ್ಕೆ.
ಶ್ರೀಕಿ ಹಾಗೂ ನಿಕಿತ ಅಭಿನಯದ ‘ಪೌರ್ಣಮಿ’ ಚಿತ್ರದ ಪೋಷಕ ಕಲಾವಿದರು – ಪವಿತ್ರ ಗೌಡ, ಅರುಣ್ ಸಾಗರ್, ಧರ್ಮ, ಸುಂದರಶ್ರೀ, ಬೋಳಾರ್ ಹಾಗೂ ಇನ್ನಿತರರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed